ಪ್ರಿಯಾಂಬದ ಮೊಹಂತಿ ಹೆಜಮಾಡಿ ವಿಜ್ಞಾನಿ, ಶಿಕ್ಷಣ ತಜ್ಞೆ ಮತ್ತು ಒಡಿಸ್ಸಿಯ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ಕಲಾ ಬರಹಗಾರ್ತಿ ಮತ್ತು ಜೀವಶಾಸ್ತ್ರಜ್ಞೆ. ೧೮ ನವೆಂಬರ್ ೧೯೩೯ ರಂದು ಜನಿಸಿದ ಇವರು ಸ್ನಾತಕೋತ್ತರ ಪದವಿಯನ್ನು ಪಡೆದರು.ಮಿಚಿಗನ್ ವಿಶ್ವವಿದ್ಯಾಲಯ, ಆನ್ ಆರ್ಬರ್, ಯು.ಎಸ್.ಎ ಯಿಂದ ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಇವರು ಬಾನ್ ಬಿಹಾರಿ ಮೈತಿ ಅವರ ಅಡಿಯಲ್ಲಿ ಚಿಕ್ಕ ವಯಸ್ಸಿನಿಂದಲೂ ಒಡಿಸ್ಸಿಯಲ್ಲಿ ಪಾಂಡಿತ್ಯವನ್ನು ಪಡೆದರು ಮತ್ತು ೧೯೫೪ ರಲ್ಲಿ ನವದೆಹಲಿಯಲ್ಲಿ ನಡೆದ ಅಂತರ-ವಿಶ್ವವಿದ್ಯಾಲಯ ಯುವ ಉತ್ಸವದಲ್ಲಿ ಅವರ ಒಡಿಸ್ಸಿ ಪ್ರದರ್ಶನವು ಪ್ರಸಿದ್ಧ ಕಲಾ ವಿಮರ್ಶಕ ಚಾರ್ಲ್ಸ್ ಫ್ಯಾಬ್ರಿ ಅವರ ಮೂಲಕ ನೃತ್ಯ ಪ್ರಕಾರವನ್ನು ಅಂತರರಾಷ್ಟ್ರೀಯ ಗಮನ ಸೆಳೆಯಲು ಸಹಾಯ ಮಾಡಿದೆ ಎಂದು ವರದಿಯಾಗಿದೆ. ಪ್ರಿಯಾಂಬದಾ ಅವರು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಫೆಲೋ ಆಗಿದ್ದಾರೆ. ಇವರು ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಒಡಿಸ್ಸಿ: ಭಾರತೀಯ ಶಾಸ್ತ್ರೀಯ ನೃತ್ಯ ರೂಪ, ಒಡಿಸ್ಸಿಯ ಭಾರತೀಯ ಶ್ರೇಷ್ಠ ರೂಪದ ಇತಿಹಾಸ ಮತ್ತು ವಿಕಾಸವನ್ನು ವಿವರಿಸುತ್ತದೆ. ಒರಿಸ್ಸಾದ ಗಹಿರ್ಮಠದ ಲೆಪಿಡೋಚೆಲಿಸ್ ಒಲಿವೇಸಿಯಾ ಆಲಿವ್ ರಿಡ್ಲೆಯ " ಪರಿಸರಶಾಸ್ತ್ರ, ಸಂತಾನೋತ್ಪತ್ತಿ ಮಾದರಿಗಳು, ಅಭಿವೃದ್ಧಿ ಮತ್ತು ಕ್ಯಾರಿಯೋಟೈಪ್ ಮಾದರಿಗಳ ಅಧ್ಯಯನ" ಬರೆದಿದ್ದಾರೆ. ಇವರು ೨೦೧೩ ರಲ್ಲಿ " ಒಡಿಸ್ಸಿ ನೃತ್ಯ ಸನ್ಮಾನ" ವನ್ನು ಪಡೆದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು ೧೯೯೮ ರಲ್ಲಿ ಪದ್ಮಶ್ರೀಯ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿತು. == ಉಲ್ಲೇಖಗಳು == == ಹೆಚ್ಚಿನ ಓದುವಿಕೆ == , (2007). : . . . 152. 978-8173053245.